ನಮ್ಮ ದೇಹಕ್ಕೆ ಜೀವವನ್ನು ಭಗವಂತನು ತುಂಬಿದನೆ ಹೊರತು ನಾವು ತುಂಬಿಕೊಂಡು ಇರಲಿಲ್ಲ. ಜೀವ ಅವನದು. ಜೀವನ ಕೂಡ ಭಗವಂತನದು. ಭಗವಂತ ಕರೆದಾಗ ಸಂತೋಷದಿಂದ ಹೊರಡಬೇಕು. ನನಗೆ ಸಾವೇ ಬರಬಾರದು ಎಂದು ಜೀವನ ಕ್ಕೆ ಅಂಟಿಕೊಳ್ಳಬಾರದು. ಇಲ್ಲಿ ಯಾವುದು ನಮ್ಮದಲ್ಲ. ಯಾವುದು ಕೂಡ ಶಾಶ್ವತವಲ್ಲ. ಭಗವಂತನಿಗೆ ಶರಣಗಬೇಕು. ನಾನು ನನ್ನದು ಎನ್ನುವುದು ಅವಿವೇಕವಾಗಿದೆ.